ಇಂತಹ ವ್ಯಕ್ತಿ ಇನ್ನೆಂತಹ ತಂದೆಯಾಗಬಹುದು, ತನ್ನ ಮಕ್ಕಳನ್ನು ಹೇಗೆ ತಾನೆ ಬೆಳೆಸಬಹುದು ಎಂದು ನೀವು ಸುಲಭವಾಗಿ ಊಹಿಸಬಲ್ಲಿರಿ. ಅಡೆಲಾಯ್‌ಡಾಳಲ್ಲಿ ತನಗೆ ಹುಟ್ಟಿದ ಮಗನನ್ನು ಅವನು ಸಂಪೂರ್ಣ ಕಡೆಗಣಿಸಿದ. ಅದಕ್ಕೆದ್ವೇಷವಾಗಲಿ, ಮದುವೆಯಿಂದ ಉಂಟಾದ ನೋವಾಗಲಿ ಕಾರಣವಲ್ಲ. ತನಗೊಬ್ಬ ಮಗ ಇದ್ದಾನೆ ಎಂಬುದನ್ನೇ ಅವನು ಮರೆತಿದ್ದ ಅಷ್ಟೇ. ತನ್ನಎಗ್ಗಿಲ್ಲದ ಅನಾಚಾರಗಳಿಂದ ಮನೆಯ ವಾತಾವರಣವನ್ನು ಹೊಲಸೆಬ್ಬಿಸಿ, ತನ್ನ ಪ್ರಲಾಪಗಳಿಂದ ಎಲ್ಲರಿಗೂ ತಲೆನೋವಾಗಿ ಓಡಾಡಿಕೊಂಡಿದ್ದ. ಇನ್ನು ಮೂರು ವರ್ಷದ ಮಗು ಮಿತ್ಯಾನನ್ನು ಮನೆಯ ನಂಬಿಕೆಯ ಕೆಲಸದ ಆಳು ಗ್ರೆಗೊರಿ ಆರೈಕೆ ಮಾಡುತ್ತಿದ್ದ. ಅವನನ್ನು ಬಿಟ್ಟರೆ ಆ ಪುಟ್ಟ ಮಗುವಿನ ಕೊಳೆಯಾದ ಅಂಗಿಯನ್ನು ಬದಲಾಯಿಸಲೂ ಆ ಮನೆಯಲ್ಲಿ ಬೇರೆ ಮತ್ತೊಬ್ಬ ಆಳು ಇರಲಿಲ್ಲ.
ಪ್ರಾರಂಭದಲ್ಲಿ ತಾಯಿಯ ತವರಿನವರೂ ಇವನನ್ನು ಮರೆತುಬಿಟ್ಟಿದ್ದರು. ಇವನ ತಾತ ಮೊದಲೇ ತೀರಿಕೊಂಡಿದ್ದ. ಅಜ್ಜಿ ಮಾಸ್ಕೋ ಸೇರಿ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಳು. ಅವಳ ಹೆಣ್ಣುಮಕ್ಕಳೆಲ್ಲ ಮದುವೆಯಾಗಿ ಬೇರೆ ಬೇರೆ ಕಡೆ ನೆಲೆಸಿದ್ದರು. ಹಾಗಾಗಿ ತಾಯಿ ಸತ್ತ ಮೇಲೆ ಒಂದು ವರ್ಷಗಳ ಕಾಲ ಮಿತ್ಯಾ ಗ್ರಿಗೊರಿಯ ಆರೈಕೆಯಲ್ಲಿ, ಸೇವಕರ ಗುಡಿಸಲಿನಲ್ಲೇ ಕಾಲ ಕಳೆದ. ಒಂದು ವೇಳೆ ಅವನ ಅಪ್ಪನಿಗೆ ಅವನ ನೆನಪಾಗಿದ್ದರೂ, ತನ್ನ ಅನಾಚಾರಗಳಿಗೆ ಅಡಚಣೆಯಾಗುವುದೆಂದು, ಅವನು ಆ ಮಗುವನ್ನು ತನ್ನ ಸೇವಕರ ಗುಡಿಸಲಿಗೇ ತಳ್ಳಿರುತ್ತಿದ್ದ. ಆದರೆ ಮಿತ್ಯಾನ ತಾಯಿಯ ಒಬ್ಬ ದಾಯಾದಿ ಪೈಟರ್ ಅಲೆಕ್ಸಾಂಡ್ರೋವಿಚ್ ಮ್ಯುಸೋವ್ ಪ್ಯಾರಿಸ್‌ನಿಂದ ಆಗಷ್ಟೇ ಹಿಂದಿರುಗಿದ್ದ. ಹಲವು ವರ್ಷಗಳ ಕಾಲ ವಿದೇಶಗಳ ರಾಜಧಾನಿಗಳಲ್ಲಿ ನೆಲೆಸಿದ್ದ ಆ ಯುವಕನನ್ನು ಮ್ಯುಸೋವ್ ಕುಟುಂಬವು ಯುರೋಪಿಯನ್ ಸಂಸ್ಕೃತಿ ಹಾಗು ವಿಚಾರಗಳನ್ನು ಮೈಗೂಡಿಸಿಕೊಂಡಿದ್ದ ಹೊಸ ಪೀಳಿಗೆಯವನು ಎಂದೇ ಭಾವಿಸಿತ್ತು. ಮುಂದೆ ತನ್ನ ಬದುಕಿನ ಅಂತ್ಯ ಕಾಲದಲ್ಲಿ, ತನ್ನ ವಯಸ್ಸು ನಲವತ್ತು-ಐವತ್ತರ ಆಸುಪಾಸು ತಲುಪಿದ ಮೇಲೆ ಎಲ್ಲರಂತೆ ಇವನೂ ಉದಾರವಾದಿಯಾಗಿ ಪರಿಣಮಿಸಿದ. ತನ್ನ ವೃತ್ತಿಜೀವನದ ಉನ್ನತಾವಸ್ಥೆಯಲ್ಲಿ ಅವನು ರಷ್ಯಾದಲ್ಲಿ ಹಾಗು ಹೊರದೇಶಗಳಲ್ಲಿ ಸಾಕಷ್ಟು ಉದಾರವಾದೀ ಚಿಂತಕರ ಸಂಪರ್ಕವನ್ನು ಹೊಂದಿದ್ದ. ಪ್ರುಡೌನ್, ಬಕುನಿನ್ ಮೊದಲಾದವರನ್ನು ವೈಯಕ್ತಿಕವಾಗಿ ಬಲ್ಲವನಾಗಿದ್ದ. ತನ್ನ ಬದುಕು ಕ್ಷೀಣಾವಸ್ಥೆಯತ್ತ ಹೊರಳುತ್ತಿದ್ದಂತೆ ಫೆಬ್ರವರಿ, ೧೮೪೮ರ ಮೂರು ದಿನಗಳ ಪ್ಯಾರಿಸ್ ಕ್ರಾಂತಿಯ ಕುರಿತು ವಿಪರೀತ ವರ್ಣನೆ ಮಾಡುತ್ತಿದ್ದ. ಹಾಗೆ ವರ್ಣಿಸುತ್ತ ಆ ಕ್ರಾಂತಿಯಲ್ಲಿ ತಾನೂ ಸ್ವತಃ ಭಾಗವಹಿಸಿದ್ದೆ ಎಂಬುದನ್ನು ಸೂಚಿಸುತ್ತಿದ್ದ. ಅವನ ಯೌವನದ ದಿನಗಳ ಮರೆಯಲಾರದ ನೆನಪುಗಳಲ್ಲಿ ಇದೂ ಒಂದಾಗಿತ್ತು.
ಇನ್ನು ಅವನ ಸಂಪತ್ತು. ಹಳೆಯ ಮಾತುಗಳಲ್ಲಿ ಹೇಳುವುದಾದರೆ ಅವನ ಬಳಿ ಒಂದು ಸಾವಿರ ಜೀವಗಳ ಸ್ವತಂತ್ರ ಆಸ್ತಿ ಇತ್ತು. ಅವನ ವಿಶಾಲವಾದ ಜಮೀನು ನಮ್ಮ ಊರಿನ ಆಚೆ ಪ್ರಸಿದ್ಧ ಕ್ರೈಸ್ತಮಠದ ಅಂಚಿನಲ್ಲಿತ್ತು. ತನ್ನ ಎಸ್ಟೇಟ್‌ಗೆ ಕಾಲಿಟ್ಟ ದಿನದಿಂದಲೇ ಅವನು ಆ ಕ್ರೈಸ್ತ ಮಠದ ಮೇಲೆ ಸಾಕಷ್ಟು ಮೊಕದ್ದಮೆಗಳನ್ನು ಹೂಡಿದ. ನೀರಿನಲ್ಲಿ ಮೀನು ಹಿಡಿಯುವ ಕುರಿತು, ಕಾಡಿನಲ್ಲಿ ಮರ ಕಡಿಯುವ ಕುರಿತು ಹೀಗೆ ಲೆಕ್ಕವಿಲ್ಲದಷ್ಟು ಪ್ರಕರಣಗಳಲ್ಲಿ ಕೊನೆಯಿಲ್ಲದಂತೆ ಮೊಕದ್ದಮೆಗಳನ್ನು ಹೂಡಿದ. ಕಾನೂನುಬದ್ಧವಾಗಿ ಹೋರಾಡುವುದು ತನ್ನಂತಹ ಸುಶಿಕ್ಷಿತ ಪ್ರಜೆಗಳ ಕರ್ತವ್ಯ ಎಂದು ಅವನು ಭಾವಿಸಿದ್ದ. ಊರಿಗೆ ಬಂದ ಮೇಲೆ ಅಡೆಲಾಯ್‌ಡಾ ಇವಾನೋವ್ನಾಳ ಕತೆಯನ್ನೆಲ್ಲ ಕೇಳಿ ಹಿಂದೊಮ್ಮೆ ತಾನು ಅವಳಲ್ಲಿ ಆಸಕ್ತನಾಗಿದ್ದುದನ್ನು ನೆನಪಿಸಿಕೊಂಡ. ಆಕೆಯ ಮಗ ಮಿತ್ಯಾನ ಸ್ಥಿತಿಯನ್ನು ತಿಳಿದ ಮೇಲೆ ಅವನ ಭವಿಷ್ಯಕ್ಕೆ ಒಂದು ದಾರಿ ಮಾಡಬೇಕು ಎನಿಸಿತು. ಫೋಯ್ದರ್ ಪಾವ್ಲೋವಿಚ್‌ನ ಬಗ್ಗೆ ಅಸಹ್ಯ ಎನಿಸಿದರೂ ಅವನೊಂದಿಗೆ ಅದು ಇದು ಮಾತನಾಡಿ ಕೊನೆಗೆ ಮಗುವಿನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವ ಕುರಿತು ಪ್ರಸ್ತಾಪಿಸಿದ. ಮೊದಮೊದಲು ಫೋಯ್ದರ್ ಪಾವ್ಲೋವಿಚ್‌ಗೆ ಇವನು ಯಾವ ಮಗುವಿನ ಕುರಿತು ಮಾತನಾಡುತ್ತಿದ್ದಾನೆ ಎಂದು ಅರ್ಥವಾಗಲಿಲ್ಲ. ಆ ಮನೆಯಲ್ಲಿ ತನಗೊಬ್ಬ ಪುಟ್ಟ ಮಗನಿದ್ದಾನೆ ಎಂದು ಆಮೇಲೆ ನೆನಪಾಗಿ ಅಚ್ಚರಿಪಟ್ಟ. ನಾನು ಹೇಳುತ್ತಿರುವ ಮಾತುಗಳು ನಿಮಗೆ ಉತ್ಪ್ರೇಕ್ಷೆಯಂತೆ ತೋರಬಹುದು. ಆದರೆ ಈ ಮಾತುಗಳಲ್ಲಿ ಸತ್ಯಾಂಶ ಇಲ್ಲದಿಲ್ಲ.
ಫೋಯ್ದರ್ ಪಾವ್ಲೋವಿಚ್ ತನ್ನ ಜೀವನವಿಡೀ ನಾಟಕ ಮಾಡಿಕೊಂಡೇ ಇದ್ದವನು. ಕೆಲವು ಸಲ ಯಾವುದೇ ಪೂರ್ವೋದ್ದೇಶ ಇಲ್ಲದಿದ್ದರೂ, ಆ ನಟನೆಯಿಂದ ತನಗೂ ಯಾವುದೇ ಲಾಭ ಇರದಿದ್ದರೂ - ಅದಕ್ಕೆ ಈ ಪ್ರಸಂಗವೇ ನಿದರ್ಶನ - ಅನಿರೀಕ್ಷಿತವಾಗಿ ವರ್ತಿಸುವ ದುಡುಕು ಸ್ವಭಾವದವನು ಆತ. ಲೋಕದಲ್ಲಿ ಇದು ತುಂಬ ಜನರ ಸ್ವಭಾವವೂ ಹೌದು. ಆ ಸ್ವಭಾವ ಫೋಯ್ದರ್ ಪಾವ್ಲೋವಿಚ್‌ನಂತಹವರಲ್ಲಿ ಮಾತ್ರವಲ್ಲ, ಕೆಲವು ಜಾಣರಲ್ಲಿಯೂ ಕಂಡುಬರುವುದುಂಟು. ಪೈಟರ್ ಅಲೆಕ್ಸಾಂಡ್ರೋವಿಚ್ ಮಿತ್ಯಾನ ಬಗ್ಗೆ ತುಂಬ ಉತ್ಸಾಹ ತೋರಿಸಿದ ಮೇಲೆ ತಾಯಿಯ ಒಂದಿಷ್ಟು ಆಸ್ತಿಯ ಉತ್ತರಾಧಿಕಾರಿಯಾಗಿದ್ದ ಆ ಮಗುವಿನ ಜಂಟಿ ಪೋಷಕನಾಗಲು ಅವನಿಗೆ ಸಮ್ಮತಿ ನೀಡಿದ. ಹೀಗೆ ಮಿತ್ಯಾ ಈ ಹೊಸ ದಾಯಾದಿಯ ಆಶ್ರಯಕ್ಕೆ ಹೋದ. ಅಲೆಕ್ಸಾಂಡ್ರೋವಿಚ್‌ಗೆ ಸಂಸಾರಸ್ಥನಲ್ಲದುದರಿಂದ ಮತ್ತು ತನ್ನ ಎಸ್ಟೇಟಿನ ಆಸ್ತಿಯನ್ನು ಭದ್ರಪಡಿಸಿಕೊಂಡು ಮತ್ತೆ ಪ್ಯಾರಿಸ್‌ಗೆ ಹೊರಡಲು ತುದಿಗಾಲಲ್ಲಿ ನಿಂತಿದ್ದುದರಿಂದ ಆ ಮಗುವನ್ನು ಅವನು ಮಾಸ್ಕೋದಲ್ಲಿದ್ದ ತನ್ನ ಇನ್ನೊಬ್ಬ ದಾಯಾದಿಯ ವಶಕ್ಕೆ ಒಪ್ಪಿಸಿದ. ಅವನು ಪ್ಯಾರಿಸ್‌ನಲ್ಲಿ ಶಾಶ್ವತವಾಗಿ ನೆಲೆಸಿದ ಮೇಲೆ, ಅದರಲ್ಲಿಯೂ ಫೆಬ್ರವರಿ ಕ್ರಾಂತಿ ಘಟಿಸಿ ಆ ನೆನಪುಗಳು ಅವನ ಜೀವಮಾನವನ್ನೇ ವ್ಯಾಪಿಸಿಕೊಂಡ ಮೇಲೆ, ಅವನು ಆ ಮಗುವನ್ನು ಪೂರ್ತಿಯಾಗಿ ಮರೆತುಬಿಟ್ಟ. ಮಾಸ್ಕೋದ ಆ ದಾಯಾದಿ ತೀರಿಕೊಂಡ ನಂತರ ಮಿತ್ಯಾ ಆ ದಾಯಾದಿಯ ಮಗಳ - ಆಕೆ ಮದುವೆಯಾಗಿ ಬೇರೊಂದು ಊರಿನಲ್ಲಿ ನೆಲೆಸಿದ್ದಳು - ಆಶ್ರಯಕ್ಕೆ ಹೋದ. ನನಗೆ ತಿಳಿದಂತೆ ಅವನ ವಾಸಸ್ಥಾನ ಹೀಗೆ ನಾಲ್ಕು ಸಲ ಬದಲಾಯಿತು. ಇಲ್ಲಿಂದಾಚೆಗೆ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಫಾಯ್ದರ್ ಪಾವ್ಲೊವಿಚ್‌ನ ಈ ಮೊದಲ ಮಗನ ಕುರಿತು ಹೇಳಲು ಇನ್ನೂ ತುಂಬ ವಿಷಯಗಳು ಇರುವುದರಿಂದ ಅತಿ ಮುಖ್ಯವಾದ ಸಂಗತಿಗಳನ್ನಷ್ಟೇ ವಿವರಿಸುತ್ತೇನೆ. ಏಕೆಂದರೆ ಆ ಸಂಗತಿಗಳನ್ನು ಸ್ಪಷ್ಟವಾಗಿ ವಿವರಿಸದೇ ನನ್ನ ಕತೆಯನ್ನು ಪ್ರಾರಂಭಿಸಲು ಬರುವುದಿಲ್ಲ.
ಮೊದಲನೆಯದಾಗಿ, ಫೋಯ್ದರ್ ಪಾವ್ಲೋವಿಚ್‌ನ ಮೂವರು ಮಕ್ಕಳಲ್ಲಿ ತನ್ನ ಹೆಸರಿನಲ್ಲಿಯೂ ಆಸ್ತಿ ಇದೆ, ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ತಾನು ಸ್ವತಂತ್ರನಾಗಿ ಜೀವಿಸಬಲ್ಲೆ ಎಂಬ ಆಲೋಚನೆ ಹೊಂದಿದ್ದ ಏಕಮಾತ್ರ ಮಗ ಈ ’ಮಿತ್ಯಾ’ ಅಥವ ದಿಮಿತ್ರಿ ಫಾಯ್ದೊರೋವಿಚ್. ಹಾಗಾಗಿ ಅವನು ತನ್ನ ಬಾಲ್ಯ ಹಾಗು ಯೌವನಾವಸ್ಥೆಗಳನ್ನು ಒಂದು ಬಗೆಯ ಅನಿಶ್ಚಿತತೆಯಲ್ಲೇ ಕಳೆದ. ತನ್ನ ಗರಡಿ ಸಾಧನೆಯನ್ನು ಪೂರ್ತಿ ಮಾಡದೆ ಮಿಲಿಟರಿಗೆ ಸೇರಿದ. ಕಾಕಸಸ್ ಪ್ರಾಂತ್ಯಕ್ಕೆ ಹೋಗಿ ಅಲ್ಲಿ ಬಡ್ತಿ ಹೊಂದಿದ. ಹೋರಾಟದಲ್ಲಿ ಸೋತು ರ್‍ಯಾಂಕನ್ನು ಕಳೆದುಕೊಂಡ, ಮತ್ತೆ ಬಡ್ತಿ ಪಡೆದ. ಗೊತ್ತು ಗುರಿ ಇಲ್ಲದಂತೆ ಬದುಕಿ ಹಣವನ್ನು ನೀರಿನಂತೆ ಖರ್ಚು ಮಾಡಿದ. ಪ್ರಾಪ್ತ ವಯಸ್ಕನಾಗುವವರೆಗೂ ಫಾಯ್ದರ್ ಪಾವ್ಲೋವಿಚ್‌ನಿಂದ ನಯಾಪೈಸೆ ಸಿಗದೆ ಸಾಲ ಮಾಡುತ್ತಲೇ ಕಾಲ ಕಳೆದ. ಅವನು ಮೊದಲ ಸಲ ತಂದೆಯನ್ನು ಕಂಡದ್ದು, ಅವನ ಬಗ್ಗೆ ತಿಳಿದುಕೊಂಡದ್ದು ಪ್ರಾಪ್ತ ವಯಸ್ಕನಾದ ಮೇಲೆಯೇ; ತಂದೆಯೊಂದಿಗೆ ಆಸ್ತಿಯ ವಿಷಯವನ್ನು ಇತ್ಯರ್ಥ ಮಾಡಲು ನಮ್ಮ ನೆರೆಯೂರಿಗೆ ಬಂದಾಗಲೇ. ಆಗ ಅವನಿಗೆ ಅಪ್ಪನ ಮೇಲೆ ಪ್ರೀತಿ ಇದ್ದಂತೆ ಏನೂ ಕಾಣಲಿಲ್ಲ. ಅವನೊಂದಿಗೆ ತುಂಬ ಹೊತ್ತು ಇರಲಿಲ್ಲ. ತಂದೆಯಿಂದ ಒಂದಿಷ್ಟು ಹಣವನ್ನು ಪಡೆದ ಮೇಲೆ ಆದಷ್ಟು ಬೇಗನೆ ಅಲ್ಲಿಂದ ಹೊರಟು ಹೋಗಲು ಚಡಪಡಿಸುತ್ತಿದ್ದಂತೆ ಕಂಡ. ಇನ್ನು ಮುಂದೆ ಎಸ್ಟೇಟಿನ್ ಆದಾಯದ ಒಂದುಪಾಲು ತನಗೆ ಸಂದಾಯವಾಗುವಂತೆ - ಅದರ ಮೌಲ್ಯ ಎಷ್ಟು ಎಂಬುದು ಅವನಿಗೆ ಗೊತ್ತಿರಲಿಲ್ಲ, ಅದನ್ನು ತಂದೆಯ ಬಾಯಿಂದ ಹೇಳಿಸಲೂ ಅವನಿಂದ ಆಗಲಿಲ್ಲ - ಕರಾರು ಮಾಡಿಕೊಂಡ. ಮಿತ್ಯಾನಿಗೆ ತನ್ನ ಆಸ್ತಿಯ ಬಗ್ಗೆ ತುಂಬ ಅಸ್ಪಷ್ಟವಾದ, ತುಂಬ ಉತ್ಪ್ರೇಕ್ಷಿತವಾದ ಕಲ್ಪನೆ ಇದೆ ಎಂದು ಫೋಯ್ದರ್ ಪಾವ್ಲೋವಿಚ್ ಗೊಣಗಿದರೂ ಕರಾರು ತನ್ನ ಇಚ್ಛೆಯಂತೆ ನಡೆದಿದೆ ಎಂದು ಒಳಗೊಳಗೇ ಸಂತೋಷ ಪಟ್ಟ. ಈ ಹುಡುಗ ಕೆಲಸವಿಲ್ಲದ ನಿಷ್ಪ್ರಯೋಜಕ, ಸಹನೆಯಿಲ್ಲದ ಹುಂಬ, ಇಂಥವನಿಗೆ ಆಗಾಗ ಅಷ್ಟಿಷ್ಟು ಹಣ ಕೊಟ್ಟು ತೃಪ್ತಿಪಡಿಸುತ್ತ ಕಾಲ ಹಾಕಬಹುದು ಎಂದು ಲೆಕ್ಕಿಸಿದ. ಅಂತೆಯೇ ಕಾಲಕಾಲಕ್ಕೆ ಕಂತಿನ ರೂಪದಲ್ಲಿ ಕೇಳಿದಾಗಲೆಲ್ಲ ಹಣ ಕಳಿಸುತ್ತಿದ್ದ. ಹೀಗೆಯೇ ನಾಲ್ಕು ವರ್ಷಗಳು ಕಳೆದವು. ಕೊನೆಗೆ ಅಪ್ಪನ ಈ ಚಿಲ್ಲರೆ ವ್ಯವಹಾರದಿಂದ ಸಿಡಿಮಿಡಿಗೊಂಡ ಮಿತ್ಯಾ ತನ್ನ ಪಾಲನ್ನು ಒಂದೇ ಸಲ ಕೊಟ್ಟುಬಿಡುವಂತೆ ಕೇಳಲು ನಮ್ಮ ಊರಿಗೆ ಬಂದಿದ್ದ. ಆದರೆ ನಾಲ್ಕು ವರ್ಷಗಳ ಬಳಿಕ ತನ್ನ ಪಾಲಿನ ಒಂದು ಚಿಕ್ಕಾಸೂ ಉಳಿದಿಲ್ಲ ಎಂದು ತಿಳಿದು ಅವನಿಗೆ ಅಚ್ಚರಿಯಾಯಿತು. ಈ ನಾಲ್ಕು ವರ್ಷಗಳಲ್ಲಿ ಫೋಯ್ದರ್ ಪಾವ್ಲೋವಿಚ್‌ನಿಂದ ಅವನು ತನ್ನ ಪಾಲಿನ ಎಷ್ಟು ಸಂಪತ್ತನ್ನು ಹಣದ ರೂಪದಲ್ಲಿ ಪಡೆದುಕೊಂಡಿದ್ದ ಎಂಬ ಲೆಕ್ಕವೇ ಅವನ ಬಳಿ ಇರಲಿಲ್ಲ. ಫೋಯ್ದರ್ ಪಾವ್ಲೋವಿಚ್ ಯಾವ ಯಾವುದೋ ಹಳೆಯ ದಿನಾಂಕಗಳನ್ನು ತೋರಿಸಿ ಎಲ್ಲ ಹಣವೂ ಈಗಾಗಲೇ ಸಂದಾಯವಾಗಿರುವುದಲ್ಲದೇ ತನಗೇ ಅವನಿಂದ ಒಂದಿಷ್ಟು ಹಣ ಸಾಲದ ರೂಪದಲ್ಲಿ ಸಂದಾಯವಾಗಬೇಕು ಎಂದು ವಾದಿಸಿದ. ತಾನು ಮೋಸ ಹೋದೆ ಎಂಬುದು ಆ ಯುವಕನಿಗೆ ಮನವರಿಕೆಯಾಯಿತು. ಈ ಆಘಾತಕಾರೀ ವಿಷಯವೇ ನನ್ನ ಕತೆಗೆ ನಾಂದಿಯಾಗಿದೆ. ಅಥವ ಕತೆಯ ಹೊರರೂಪವಾಗಿದೆ. ಆ ಕತೆಯನ್ನು ಪ್ರಾರಂಭಿಸುವ ಮುನ್ನ ಫೋಯ್ದರ್ ಪಾವ್ಲೋವಿಚ್‌ನ ಇನ್ನಿಬ್ಬರು ಮಕ್ಕಳ ಬಗ್ಗೆ, ಅವರ ಹುಟ್ಟಿನ ಬಗ್ಗೆ ಒಂದಿಷ್ಟು ಹೇಳಬೇಕು.

No comments:
Post a Comment