ಗಾಂಧಿಯ ಸೇವಾಗ್ರಾಮದಲ್ಲಿ ಒಂದು ನಿರಂತರ ಘರ್ಷಣೆ, ತಿಕ್ಕಾಟ ಇದ್ದೇ ಇತ್ತು. ಏಕೆಂದರೆ ಅವರ ಮಗ ರಾಮದಾಸ್ ನನ್ನ ಸ್ನೇಹಿತ. ಆ ಕಡೆ ಹೋದಾಗಲೆಲ್ಲ ಅವರನ್ನು ಭೇಟಿ ಮಾಡುತ್ತೇನೆ, ಇಲ್ಲವೇ ಅವರೇ ಬಂದು ನನ್ನನ್ನು ಭೇಟಿಯಾಗುವುದೂ ಉಂಟು. ಹಾಗಾಗಿ ಸೇವಾಗ್ರಾಮದ ಒಳಹೊರಗನ್ನೂ ಅವರ ಮೂಲಕ ಅರಿಯುತ್ತಿದ್ದೆ. ರಾಮದಾಸ್ ಹಾಗು ನನ್ನ ಸ್ನೇಹ ಬೆಳೆಯುವ ಹೊತ್ತಿಗಾಗಲೇ ಗಾಂಧಿ ತೀರಿಕೊಂಡಿದ್ದರು. ರಾಮದಾಸ್ ’ಆಶ್ರಮದ ವಾಸದಲ್ಲಿ ಒಂದಿಷ್ಟೂ ಸುಖವಿಲ್ಲ, ಸಣ್ಣ ಪುಟ್ಟ ವಿಷಯಗಳಿಗೂ ಗಾಂಧಿ ಕಿರಿಕಿರಿ ಮಾಡುತ್ತಿದ್ದರು, ಪ್ರತಿಯೊಬ್ಬರನ್ನೂ, ಎಲ್ಲ ರೀತಿಗಳಿಂದಲೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಗಾಂಧಿ ಪ್ರಯತ್ನಿಸುತ್ತಿದ್ದರು. ಅವರು ಹೊರಗೆ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಆಶ್ರಮದೊಳಗೆ ಗುಲಾಮಗಿರಿಯನ್ನು ಸ್ಥಾಪಿಸಿದ್ದರು’ ಎಂದು ಹೇಳುತ್ತಿದ್ದರು. ಎಲ್ಲ ಸಂತರ ಕಥೆಯೂ ಇದೇ. ಅವರು ತಮ್ಮ ಮೇಲೆಯೇ ಗುಲಾಮತನವನ್ನು ಹೇರಿಕೊಳ್ಳುವುದರಿಂದ ತಮ್ಮ ಶಿಷ್ಯರ ಮೇಲೂ ಗುಲಾಮತನ ಹೇರುವ ಅಧಿಕಾರ ತಮಗಿದೆ ಎಂದು ಭಾವಿಸಿರುತ್ತಾರೆ. ಸಣ್ಣಪುಟ್ಟ ಕೆಲಸಕ್ಕೆ ಬಾರದ ವಿಷಯಗಳೂ ಗಾಂಧಿಯನ್ನು ಬಾಧಿಸುತ್ತಿತ್ತಂತೆ. ಸೇವಾಗ್ರಾಮದಲ್ಲಿ ’ಆ ವ್ಯಕ್ತಿ ಮೂರು ಜೊತೆಗಿಂತ ಹೆಚ್ಚು ಬಟ್ಟೆಗಳನ್ನು ಏಕೆ ಇಟ್ಟುಕೊಂಡ?’ ’ಮತ್ತೊಬ್ಬ ಶಿಷ್ಯ ನಾಲ್ಕು ಗಂಟೆಯಾದರೂ ಏಕೆ ಮಲಗಿಯೇ ಇದ್ದ?’ ’ಇನ್ನೊಬ್ಬ ರಾತ್ರಿ ಎಷ್ಟು ಗಂಟೆಗೆ ಮಲಗುತ್ತಾನೆ, ಯಾವ ಆಹಾರ ಸೇವಿಸುತ್ತಾನೆ?’,..ಇಂಥವು ಗಾಂಧಿಯ ಕಾಳಜಿಗಳಂತೆ. ಇಂತಹ ಚಿಲ್ಲರೆ ಕಾಳಜಿಗಳು ನಿಸ್ಸಂಶಯವಾಗಿ ಅಡ್ಡದಾರಿಗಳಿಗೆ ಜನ್ಮ ನೀಡುತ್ತದೆ. ಜನ ಕಳ್ಳದಾರಿಗಳನ್ನು ಹುಡುಕಿಕೊಂಡೇ ತೀರುತ್ತಾರೆ. ಕೆಲವರು ಇಸ್ಪೀಟು ಆಡಿದರೆ ತಪ್ಪೇನು? ಅವರೇನು ಹಣ ಇಟ್ಟು ಜೂಜಾಡುತ್ತಿರುವರೇ? ಜೂಜಾಡಲು ಆಶ್ರಮದಲ್ಲಿ ಹಣವಾದರೂ ಎಲ್ಲಿಂದ ಬರಬೇಕು? ಒಂದು ವೇಳೆ ಸಿಕ್ಕಿಬಿದ್ದರೆ ಗಾಂಧಿಯಿಂದಾಗಿ ಇಡೀ ದೇಶದೆದುರು ಅವರ ತೇಜೋವಧೆ ನಡೆಯುತ್ತಿತ್ತು. ಗಾಂಧಿ ನೀಡುತ್ತಿದ್ದ ಹಿಂಸೆ ಸ್ಟಾಲಿನ್ ತರಹದ ಸರಳವಾದ, ನೇರವಾದ ಹಿಂಸೆಯಲ್ಲ. ಅವರು ಯಾರಿಗೆ ಏನೇ ಶಿಕ್ಷೆ ವಿಧಿಸಿದರೂ ಅದಕ್ಕಿಂತಲೂ ತೀವ್ರವಾಗಿ ತಮ್ಮನ್ನು ತಾವು ಶಿಕ್ಷಿಸಿಕೊಳ್ಳುತ್ತಿದ್ದರು. ಹಾಗಾಗಿ ಸೇವಾಗ್ರಾಮದಲ್ಲಿ ಗಾಂಧಿಯ ವಿರುದ್ಧ ಪ್ರತಿಭಟಿಸಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.
ಗಾಂಧೀ ಆಶ್ರಮದಲ್ಲಿ ಚಹಾಗೂ ನಿಷೇಧ ಹೇರಲಾಗಿತ್ತು. ಅಲ್ಲಿ ಬೀಡಿ ಸೇದುವಂತಿಲ್ಲ, ಇಸ್ಪೀಟು ಆಡುವಂತಿಲ್ಲ, ಸಣ್ಣ ಪುಟ್ಟ ಚಿಲ್ಲರೆ ವಿಷಯಗಳನ್ನೂ ಅಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತಿತ್ತು. ಗಾಂಧಿಯ ಸೇವಾಗ್ರಾಮದಲ್ಲಿ ಬೆಳಗಿನ ಹೊತ್ತು ಕೆಲವರು ಆಗಾಗ ಕದ್ದು ಮುಚ್ಚಿ, ಬಾಗಿಲುಗಳನ್ನು ಭದ್ರ ಪಡಿಸಿಕೊಂಡು ಚಹಾ ಕುಡಿಯುತ್ತಿದ್ದರು. ಹಾಗೆ ಸದ್ದಿಲ್ಲದೆ ಬಾಗಿಲು ಹಾಕಿಕೊಂಡವರನ್ನು ಅಲ್ಲಿದ್ದ ಬೇರೆಯವರೆಲ್ಲ ಸಂಶಯದಿಂದ ನೋಡುತ್ತಿದ್ದರು, ಪತ್ತೆದಾರಿ ಕೆಲಸ ಮಾಡುತ್ತಿದ್ದರು. ಅವನು ಹೊರಗೆ ಹೋಗಿದ್ದ ಸಮಯದಲ್ಲಿ ಒಳನುಗ್ಗಿ ಎಲ್ಲೆಡೆ ಜಾಲಾಡಿ ಚಹಾದ ಸೊಪ್ಪು ಏನಾದರೂ ಸಿಕ್ಕರೆ ಅದರೊಂದಿಗೆ ಅವನನ್ನೂ ಎಳೆತಂದು ಗಾಂಧಿಯ ಎದುರು ಅಪರಾಧಿಯಂತೆ ನಿಲ್ಲಿಸುತ್ತಿದ್ದರಂತೆ. ಆದರೆ ಅಂಥವರು ಸೇವಾಗ್ರಾಮದಲ್ಲಿ ಒಬ್ಬಿಬ್ಬರೇ ಏನೂ ಇರಲಿಲ್ಲ. ತುಂಬ ಜನ ಚಹಾ ಪ್ರಿಯರು ಸಂಘಟನೆಯಾಗುತ್ತಿದ್ದರು. ಬೀಡಿಯ ಚಟವಿದ್ದವರೆಲ್ಲ ಸುಲಭವಾಗಿ ಒಂದಾಗಿ ಬಿಡುತ್ತಿದ್ದರು. ಆಗೆಲ್ಲ ಗಾಂಧಿ ತಮ್ಮ ಮೇಲೆಯೇ ಆಮರಣಾಂತ ಉಪವಾಸ ಶಿಕ್ಷೆ ಹೇರಿಕೊಳ್ಳುವ ನೆವದಲ್ಲಿ ಅಂಥವರನ್ನು ಶಿಕ್ಷಿಸುತ್ತಿದ್ದರು. ಅವರು ತಮ್ಮ ಜೀವಿತದಲ್ಲಿ ಆಮರಣಾಂತ ಉಪವಾಸಕ್ಕೆ ಎಂದೂ ಸಂಕಲ್ಪಿಸಿರದಿದ್ದರೂ ಪ್ರತಿ ಉಪವಾಸವನ್ನೂ ’ಆಮರಣಾಂತ’ ಎಂದೇ ಘೋಷಿಸಿಕೊಳ್ಳುತ್ತಿದ್ದರು. ’ನಾವು ಚಹಾ ಕುಡಿಯುವುದಕ್ಕೂ ನಿಮ್ಮ ಉಪವಾಸಕ್ಕೂ ಎತ್ತಣಿಂದೆತ್ತ ಸಂಬಂಧ!’ ಎಂದು ಅವರು ಕೇಳಿದಾಗ ಗಾಂಧೀ ’ನನ್ನಲ್ಲಿಯೇ ಏನೋ ದೋಷವಿರಬೇಕು. ನನ್ನ ಆಶ್ರಮದಲ್ಲಿ ನಿಮಗೆ ಚಹಾ ಕುಡಿಯುವ ಆಸೆ ಹುಟ್ಟಿಕೊಂಡಿದೆ ಎಂದರೆ ಏನರ್ಥ? ನನ್ನ ಶೋಧನೆ ಹಾಗು ಶುದ್ಧೀಕರಣಕ್ಕಾಗಿ ಹೀಗೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಿದ್ದರಂತೆ. ಕ್ಷುಲ್ಲಕವಾದ ಚಹಾಸೇವನೆಯಿಂದ ಗಾಂಧಿಯ ಹತ್ಯೆಯಾಗಬೇಕೇ ಎಂದು ಬೇಸರಿಸಿ ಅಂಥವರು ಉಪವಾಸ ನಿರತರಾಗಿದ್ದ ಗಾಂಧಿಯ ಕಾಲಿಗೆ ಬಿದ್ದು ’ಇನ್ನು ಜೀವಮಾನದಲ್ಲಿ ಚಹಾ ಮುಟ್ಟುವುದಿಲ್ಲ, ನೀವು ಮಾತ್ರ ಉಪವಾಸ ನಿಲ್ಲಿಸಿ’ ಎಂದು ಆಣೆ ಪ್ರಮಾಣ ಮಾಡಿ ಬೇಡಿಕೊಳ್ಳುತ್ತಿದ್ದರಂತೆ. ಹೀಗೆ ಮೂರು ನಾಲ್ಕು ದಿನ ಉಪವಾಸ ಕುಳಿತು ಇಡೀ ಆಶ್ರಮವನ್ನು ಹೆದರಿಸಿ ಆತಂಕ ಉಂಟುಮಾಡುತ್ತಿದ್ದರು. ಬಡಪಾಯಿ ಶಿಷ್ಯರ ಅಲ್ಪವ್ಯಸನಗಳನ್ನು ಖಂಡಿಸಿ ದೇಶದೆಲ್ಲೆಡೆಯಿಂದ ನೂರಾರು ಪತ್ರಗಳು, ತಂತಿಗಳು ಸೇವಾಗ್ರಾಮಕ್ಕೆ ತಲುಪುತ್ತಿದ್ದವು. ಅವರು ವಾರಗಟ್ಟಲೆ ಕುಳಿತು ಪ್ರತಿಯೊಂದಕ್ಕೂ ಕ್ಷಮಾಪಣೆಯ ಉತ್ತರವನ್ನು ನೀಡಬೇಕಾಗುತ್ತಿತ್ತು. ಎಲ್ಲೆಡೆ ಅಂಥವರಿಗೆ ಅವಮಾನ ಕೆಟ್ಟ ಹೆಸರು ಸಿಗುವಂತಾಗುತ್ತಿತ್ತು.೪೩
ಆ ಆಶ್ರಮದಲ್ಲಿ ಪ್ರೀತಿಗೆ ಕೂಡ ಅವಕಾಶ ಇರಲಿಲ್ಲ. ಒಮ್ಮೆ ಅವರ ಕಾರ್ಯದರ್ಶಿ ಪ್ಯಾರೇಲಾಲ್ ಯಾರನ್ನೋ ಪ್ರೀತಿಸಿಬಿಟ್ಟರು. ಪ್ರೀತಿ ಏನು ಹೇಳಿ ಕೇಳಿ ಬರುವುದೇ? ಪ್ರೀತಿ ಉಂಟಾದ ಬಳಿಕವೇ ಪ್ರೀತಿ ಹುಟ್ಟಿತು ಎಂದು ತಿಳಿಯುವುದು. ಈ ವಿಚಾರ ಗಾಂಧಿಗೆ ತಿಳಿದಾಗ ’ನಿನ್ನಂಥವನು ಪ್ರೇಮ ಪ್ರಕರಣದಲ್ಲಿ ಸಿಲುಕಿಕೊಳ್ಳುವುದೇ!’ ಎಂದು ಆಶ್ಚರ್ಯ ವ್ಯಕ್ತ ಪಡಿಸಿದರಂತೆ. ಮಾತ್ರವಲ್ಲ, ಆಗ ಇದು ದೇಶದಲ್ಲೆಲ್ಲ ದೊಡ್ಡ ಸುದ್ದಿಯಾಗಿ ಪ್ಯಾರೇಲಾಲನನ್ನು ತುಂಬ ಅವಮಾನಕರ ರೀತಿಯಲ್ಲಿ ಆಶ್ರಮದಿಂದ ಓಡಿಸಲಾಯಿತಂತೆ. ಒಮ್ಮೆ ಅವರ ಮಗ ದೇವದಾಸನು ಚಕ್ರವರ್ತಿ ರಾಜಗೋಪಾಲಾಚಾರಿಯ ಮಗಳ ಜೊತೆ ಪ್ರೇಮ ಪ್ರಕರಣದಲ್ಲಿ ಸಿಲುಕಿದಾಗಲೂ ಗಾಂಧಿ ಪೇಚಿಗೆ ಸಿಲುಕಿದವರಂತೆ ವರ್ತಿಸಿದರಂತೆ. ನನ್ನ ಮಗ ಹೀಗೆ ಮಾಡಿದನೆಂದರೆ ನನ್ನಲ್ಲೇ ಏನೋ ದೋಷವಿರಬೇಕು ಎಂದು ಕಳವಳ ಪಟ್ಟರಂತೆ. ಆಕೆ ಗರ್ಭಿಣಿ ಬೇರೆ ಆಗಿದ್ದರಿಂದ ಅವರಿಬ್ಬರನ್ನೂ ಆಶ್ರಮದಿಂದ ಓಡಿಸುವಂತೆಯೂ ಇಲ್ಲ, ಬೇರೆ ಜಾತಿಯ ಹೆಣ್ಣಾದುದರಿಂದ ಮದುವೆ ಮಾಡಿಸುವಂತೆಯೂ ಇಲ್ಲ. ಜೀವಮಾನವಿಡೀ ಜಾತಿಯನ್ನು ನಿರ್ಮೂಲನೆ ಮಾಡಬೇಕೆಂದು ಪ್ರಚಾರ ಮಾಡುತ್ತಿದ್ದ ಗಾಂಧಿಗೆ ತಮ್ಮ ಮಗನ ಮದುವೆಗೆ ಜಾತಿ ಅಡ್ಡಿಯಾಯಿತು.
ಗಾಂಧಿಯ ಸಮಕಾಲೀನರಾಗಿದ್ದ ರಾಜಗೋಪಾಲಾಚಾರಿಯೇನೂ ಗಾಂಧೀವಾದಿಯಲ್ಲ ಆದರೂ ಅವರು ಹೇಗೆ ಭಾರತದ ಮೊದಲ ಗವರ್ನರ್ ಜನರಲ್ ಆದರು? ಅವರೂ ಕಾಂಗ್ರೇಸ್ ಸದಸ್ಯರಾದರೂ ಗಾಂಧಿಯೊಡನೆ ಕೊನೆಯವರೆಗೂ ಭಿನ್ನಾಭಿಪ್ರಾಯ ಇರಿಸಿಕೊಂಡಿದ್ದವರು. ಆದರೆ ಆತ ದಕ್ಷಿಣ ಭಾರತದ ಒಳ್ಳೆಯ ಮುತ್ಸದ್ದಿ. ಹಾಗಾಗಿ ಗಾಂಧಿಯ ಕಠಿಣ ನಿಯಮಗಳು ಅವರೆದುರು ಕೆಲಸಕ್ಕೆ ಬರುತ್ತಿರಲಿಲ್ಲ. ಮಗಳನ್ನು ನೋಡಲು ಅವರು ಆಗಾಗ ಆಶ್ರಮಕ್ಕೆ ಬರುತ್ತಿದ್ದರು. ಮಗಳು ಮಾಡಿಕೊಡುತ್ತಿದ್ದ ಚಹಾವನ್ನೂ ಆಶ್ರಮದಲ್ಲೇ ಕುಡಿಯುತ್ತಿದ್ದರು, ಅಲ್ಲೇ ಸಿಗರೇಟನ್ನೂ ಸೇದುತ್ತಿದ್ದರು. ಆದರೆ ಗಾಂಧಿ ಆಗೆಲ್ಲ ಉಪವಾಸ ಮಾಡುತ್ತಿರಲಿಲ್ಲ. ಆಗ ದೇವದಾಸ್ ’ಈಗ ನೀನೇಕೆ ಉಪವಾಸ ಮಾಡುವುದಿಲ್ಲ?’ ಎಂದು ಕೇಳಿದರೆ ’ಆತ ನನಗೆ ಸೇರಿದವನಲ್ಲ, ನನ್ನ ಶಿಷ್ಯನೂ ಅಲ್ಲ. ಆತ ಹೊರಟ ಮೇಲೆ ಆ ಕೋಣೆಯನ್ನು ಶುದ್ಧೀಕರಿಸಿದರಾಯಿತು’ ಎನ್ನುತ್ತಿದ್ದರು. ಆ ಶುದ್ಧೀಕರಣವಾದರೂ ಏನು? ನೆಲಕ್ಕೆ ಗೋಡೆಗಳಿಗೆ ಹಸುವಿನ ಸಗಣಿಯನ್ನು ಬಳಿಯುವುದು. ಹಸುವಿನ ಸಗಣಿ ಎಲ್ಲ ಪಾಪಗಳನ್ನು ನಾಶಮಾಡಬಲ್ಲದು! ಆ ಪಾಪಗಳಾದರೂ ಯಾವುವು? ಚಹಾ ಕುಡಿಯುವುದು, ಸಿಗರೇಟು ಸೇವನೆ, ಇವೆಲ್ಲ ಪಾಪಗಳೇ? ಆದರೆ ಅವರನ್ನು ಆಶ್ರಮಕ್ಕೆ ಬರದಂತೆ ತಡೆಯುವಂತೆಯೂ ಇಲ್ಲ. ಬೀಗತನ ಬೆಳೆಸಿಕೊಂಡಿದ್ದಾಗಿದೆ, ಜೊತೆಗೆ, ಕಾಂಗ್ರೇಸ್‌ನ ಹಿರಿಯ ನಾಯಕ ಬೇರೆ. ಹಾಗಾಗಿ ಗಾಂಧಿ ಅವರನ್ನು ಭಾರತದ ಮೊದಲ ಗವರ್ನರ್ ಜನರಲ್ ಆಗಿ ನೇಮಕ ಮಾಡಿ ತಮ್ಮ ಪ್ರತೀಕಾರವನ್ನು ತೀರಿಸಿಕೊಂಡರು. ರಾಜಕಾರಿಣಿಗಳು ಇಡುವ ಹೆಜ್ಜೆಗಳು ನಮಗೆ ಸುಲಭವಾಗಿ ಗೋಚರಿಸುವಂಥದಲ್ಲ. ಮೇಲ್ನೋಟಕ್ಕೆ ಗಾಂಧಿ ಪಕ್ಷಪಾತ ಮಾಡುತ್ತಿದ್ದಾರೆ, ತಮ್ಮ ನಂಟರಿಗೇ ಉನ್ನತ ಹುದ್ದೆಗಳನ್ನು ನೀಡುತ್ತಿದ್ದಾರೆ ಎಂದು ತುಂಬ ಜನ ಒಳಗೇ ಅಂದುಕೊಂಡರು.
ಆದರೆ ರಾಜಗೋಪಾಲಾಚಾರಿ ಇನ್ನೆಲ್ಲಿ ಪ್ರಧಾನಿಯೋ, ರಾಷ್ಟ್ರಪತಿಯೋ ಆಗಿಬಿಡುವರೋ ಎಂದು ಮುಂಜಾಗ್ರತೆ ವಹಿಸಿ ಬೇಕೆಂದೇ ಅವರನ್ನು ಗಾಂಧಿ ಗವರ್ನರ್ ಜನರಲ್ ಮಾಡಿದರು. ಏಕೆಂದರೆ ನಮ್ಮ ಸಂವಿಧಾನದಲ್ಲಿ ಗವರ್ನರ್ ಜನರಲ್ ಹುದ್ದೆ ಅಸ್ತಿತ್ವದಲ್ಲೇ ಇಲ್ಲದಂತಹುದು. ಗವರ್ನರ್ ಜನರಲ್ ಎಂದರೆ ಬ್ರಿಟನ್ನಿನ ಪ್ರತಿನಿಧಿ ಎಂದರ್ಥ. ಸ್ವತಂತ್ರ ಭಾರತದಲ್ಲಿ ಅದು ಹದಿನೈದು ದಿನಗಳ ಒಂದು ತಾತ್ಕಾಲಿಕ ಹುದ್ದೆಯಾಗಿತ್ತು. ಹಿಂದಿರುಗುತ್ತಿದ್ದ ಮೌಂಟ್ ಬ್ಯಾಟನ್ ತನ್ನ ಅಧಿಕಾರವನ್ನು ಯಾರಿಗಾದರೂ ವಹಿಸಿಕೊಡಬೇಕಾಗಿತ್ತು. ಆಗ ಕಾಂಗ್ರೇಸ್ ತನ್ನ ಪ್ರಧಾನಿಯನ್ನಾಗಿ ಇನ್ನೂ ಯಾರನ್ನೂ ಆರಿಸಿರಲಿಲ್ಲ. ಸತ್ತ ಕುದುರೆಯಂತಹ ಒಂದು ಹುದ್ದೆ ಅದು. ಪ್ರಧಾನಿಗೆ, ಸಂಪುಟದ ಇತರ ಸಚಿವರುಗಳಿಗೆ ಪ್ರಮಾಣ ವಚನ ಬೋಧಿಸಿ ಕುರ್ಚಿಯಿಂದ ಕೆಳಗಿಳಿವುದಷ್ಟೇ ಆ ಹುದ್ದೆಯ ಹೊಣೆಗಾರಿಕೆ. ರಾಜಗೋಪಾಲಾಚಾರಿಯೂ ಗಾಂಧಿಯ ಚಾಣಾಕ್ಷತನಕ್ಕೆ ಮೋಸ ಹೋದರು. ಹದಿನೈದು ದಿನಗಳಾದ ಮೇಲೆ ಆತ ತನ್ನ ನಾಡಿಗೆ ಹಿಂದಿರುಗಿ ಮದ್ರಾಸ್ ಪ್ರಾಂತದ ಮುಖ್ಯಮಂತ್ರಿಯ ಹುದ್ದೆ ವಹಿಸಿಕೊಂಡರು. ಇಡೀ ಭಾರತದ ಗವರ್ನರ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದ ವ್ಯಕ್ತಿ ಒಂದು ಸಣ್ಣ ಪ್ರಾಂತದ ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳುವುದು ಎಂದರೇನು? ಆದರೆ ಅಧಿಕಾರದ ವ್ಯಾಮೋಹವೇ ಅಂತಹುದು.೪೪
ಸೊಳ್ಳೆ ಪರದೆ ವೈಭವದ ಜೀವನವನ್ನು ಸೂಚಿಸುತ್ತದೆ ಎಂದು ಭಾವಿಸಿ ಗಾಂಧೀ ಕಾಲದಿಂದಲೂ ವಾರ್ಧಾದ ಆಶ್ರಮದಲ್ಲಿ ಸೊಳ್ಳೆಪರದೆಗೆ ನಿಷೇಧ ಹೇರಲಾಗಿತ್ತು. ಒಮ್ಮೆ ರಾಮದಾಸ್ ತಮ್ಮ ಆಶ್ರಮಕ್ಕೆ ಆಹ್ವಾನಿಸಿದ್ದಾಗ ’ಸೊಳ್ಳೆಪರದೆ ಇಲ್ಲದೆ ನಿಮ್ಮ ಆಶ್ರಮದಲ್ಲಿ ರಾತ್ರಿಯನ್ನು ಕಳೆಯಲು ನನ್ನಿಂದಾಗದು, ಸೊಳ್ಳೆಪರದೆ ಐಷಾರಾಮೀ ವಸ್ತುವಲ್ಲ ಅದೊಂದು ಮೂಲಭೂತ ಅಗತ್ಯ ಎಂದು ಸಾಮಾನ್ಯಜ್ಞಾನಕ್ಕೂ ತಿಳಿಯುವುದಿಲ್ಲವೇ?’ ಎಂದು ಕೇಳಿದ್ದೆ. ಸೊಳ್ಳೆಪರದೆಗೆ ಬದಲಾಗಿ ಮೈಗೆಲ್ಲ ಸೀಮೆ ಎಣ್ಣೆ ಹಚ್ಚಿಕೊಳ್ಳಬೇಕು ಎಂದು ಗಾಂಧಿ ಸೂಚಿಸಿದ್ದರಂತೆ. ಒಂದು ದಿನ ಗೊತ್ತಿಲ್ಲದೇ ಅವರ ಆಶ್ರಮದಲ್ಲಿ ಮೈ ಕೈಗೆಲ್ಲ ಸೀಮೆ ಎಣ್ಣೆ ಹಚ್ಚಿಕೊಂಡು ಮಲಗಿದ್ದೆ. ರಾತ್ರಿಯಿಡೀ ಸೀಮೆ ಎಣ್ಣೆ ವಾಸನೆಗೆ ನಿದ್ರೆಯೇ ಬರಲಿಲ್ಲ. ಇದಕ್ಕಿಂತ ಸೊಳ್ಳೆಯ ಕಾಟವೇ ಎಷ್ಟೋ ವಾಸಿ ಎನಿಸಿತು. ಇದೇನು ಆಶ್ರಮವೋ ಅಥವ ಹುಚ್ಚಾಸ್ಪತ್ರೆಯೋ ಎಂದುಕೊಂಡು ನಡುರಾತ್ರಿಯೇ ಎದ್ದು ಹೊರನಡೆದೆ. ಅಲ್ಲಿ ಪ್ರತಿ ಹಂತದಲ್ಲೂ ಬದುಕನ್ನು ಅಸಾಧ್ಯವೂ ಅಸ್ವಾಭಾವಿಕವೂ ಆಗಿಸುವ ಪ್ರಯತ್ನ ನಡೆಯುತ್ತದೆ. ಅಲ್ಲಿ ರುಚಿಯಾದ ಪದಾರ್ಥಗಳನ್ನು ತಿನ್ನುವಂತಿಲ್ಲ (ಇದೂ ಕೂಡ ’ಅಸ್ವಾದ’ ಎಂಬ ಜೈನಧರ್ಮದ ಪಂಚ ಅಣುವ್ರತಗಳಲ್ಲಿ ಒಂದು). ರುಚಿಯಾದುದನ್ನು ತಿಂದರೆ ರಸಗ್ರಂಥಿಗಳು ಕೆರಳಿಬಿಡುತ್ತವಂತೆ! ಪಾಪ, ನಾಲಗೆಯ ರಸಗ್ರಂಥಿಗಳಿಗೆ ಇವರ ಆಧ್ಯಾತ್ಮವೇನು ಗೊತ್ತು? ಆ ಆಶ್ರಮದಲ್ಲಿ ನನಗೆ ತುಂಬ ಕಷ್ಟವಾಗಿದ್ದೆಂದರೆ ಊಟದ ಸಮಯದಲ್ಲಿ. ಅಲ್ಲಿ ಎಲ್ಲರಿಗೂ ಊಟಕ್ಕೆ ಬೇವಿನ ಚಟ್ನಿಯನ್ನು ಬಡಿಸುತ್ತಿದ್ದರು. ಬೇವಿಗೆ ಔಷಧೀಯ ಗುಣಗಳಿವೆಯಂತೆ, ರಕ್ತಶುದ್ಧಿ ಮಾಡುವುದಂತೆ. ಆಗ ನಾನು ರಾಮದಾಸ್‌ನನ್ನು ಕೇಳಿದೆ ’ನಾವೇನು ರಕ್ತಶುದ್ಧಿ ಮಾಡಿಕೊಳ್ಳಲು ಉಣ್ಣುತ್ತಿರುವೆವೇ? ಅಷ್ಟಕ್ಕೂ ಊಟದ ರುಚಿಯನ್ನು ಹೀಗೆ ಹದಗೆಡಿಸಿಕೊಳ್ಳುವುದಕ್ಕೆ ’ಅಸ್ವಾದ’ ಎಂಬ ಮೌಲ್ಯವನ್ನು ನೀಡುವುದು ಸರಿಯೇ? ನಾಲಗೆಯಿಂದ ಕಹಿಯನ್ನು ಸವಿಯುವುದೂ ಒಂದು ಅನುಭವವೇ ಅಲ್ಲವೇ? ಕ್ರಮೇಣ ನಾಲಗೆಯು ಸಿಹಿಗೆ ಒಗ್ಗಿದಂತೆ ಕಹಿಗೂ ಒಗ್ಗಿಬಿಡುವುದಿಲ್ಲವೇ?’ ಆಗ ರಾಮದಾಸ್ ನಿಮ್ಮ ಮಾತು ಸರಿ ಎಂಬಂತೆ ತಲೆಯಾಡಿಸಿದರು.೪೫
ಗಾಂಧಿ ತಮ್ಮ ಸರಳಜೀವನವನ್ನು ಪ್ರದರ್ಶಿಸಲು ಸೇವಾಗ್ರಾಮದಲ್ಲಿ ಮೇಕೆಯ ಹಾಲನ್ನು ಕುಡಿಯುತ್ತಿದ್ದರಂತೆ. ನನ್ನ ಸಂಶೋಧನೆಯ ವಿಧಿವಿಧಾನ ಸ್ವಲ್ಪ ವಿಲಕ್ಷಣವಾದುದು. ಎಲ್ಲರೂ ಗಾಂಧಿಯ ಸರಳತೆಯನ್ನು ಕೊಂಡಾಡುತ್ತಿದ್ದರೆ ನಾನು ಸೇವಾಗ್ರಾಮದಲ್ಲಿದ್ದಾಗ ಆ ಬಡಪಾಯಿ ಮೇಕೆಯ ಮೂಲವನ್ನು ಹುಡುಕಿಕೊಂಡು ಹೊರಟೆ. ನನಗೆ ನಿಜಕ್ಕೂ ಗಾಂಧಿಯ ಸರಳ ಜೀವನ ವಿಧಾನವನ್ನು ಕಂಡು ಅಚ್ಚರಿಯಾಯಿತು. ಸೇವಾಗ್ರಾಮದಲ್ಲಿದ್ದ ಪ್ರತಿಯೊಬ್ಬರನ್ನೂ ಆ ಮೇಕೆಯ ಬಗ್ಗೆ ವಿಚಾರಿಸಿದೆ. ಅವರಿಂದ ತಿಳಿದು ಬಂದ ವಿಷಯವಿದು: ಆ ಮೇಕೆಗೆ ಪ್ರತಿದಿನವೂ ಲಕ್ಸ್ ಸೋಪಿನಿಂದ ಸ್ನಾನ ಮಾಡಿಸಲಾಗುತ್ತಿತ್ತಂತೆ. ಅದರ ಮೇವಿಗೆ ಪ್ರತಿದಿನ ಹತ್ತು ರೂಪಾಯಿ ಖರ್ಚಾಗುತ್ತಿತ್ತಂತೆ. ಆ ದಿನಗಳಲ್ಲಿ ಹತ್ತು ರೂಪಾಯಿ ಒಬ್ಬ ಶಾಲಾ ಶಿಕ್ಷಕನ ತಿಂಗಳ ವೇತನವಾಗಿತ್ತು. ಇದನ್ನೆಲ್ಲ ಯಾವ ಗಾಂಧೀವಾದಿಯೂ ಯೋಚಿಸುವುದಿಲ್ಲ. ಒಮ್ಮೆ ತಮಾಷೆಗೆ ಸರೋಜಿನೀ ನಾಯ್ಡು ಅವರು ’ಗಾಂಧಿಯವರನ್ನು ಬಡವರನ್ನಾಗಿ ಇರಿಸಲು ನಾವು ನಮ್ಮ ಐಶ್ವರ್ಯವನ್ನೆಲ್ಲ ಧಾರೆ ಎರೆಯಬೇಕು’ ಎಂದು ಹೇಳಿದ್ದರು. ಅವರ ಮಾತು ನಿಜ. ಗಾಂಧಿಯ ಸರಳತೆ ತುಂಬ ದುಬಾರಿಯಾದುದು. ಆದರೆ ಗಾಂಧಿಯ ಲೆಕ್ಕಾಚಾರವೊಂದೂ ಸುಳ್ಳಾಗಲಿಲ್ಲ. ದೇಶದ ಬಡವರೆಲ್ಲ ’ಈತನೇ ನಮ್ಮ ನಿಜವಾದ ಪ್ರತಿನಿಧಿ ಎಂದು ಭಾವಿಸಿದರು. ಬಡವರ ಮೇಲೆ ಅನುಕಂಪ ತೋರಿಸಿ ತಾನೂ ಅವನಂತೆ ಬದುಕುವುದೇ ನಿಜವಾದ ಮೌಲ್ಯ ಎನ್ನುವುದಾದರೆ ಕುಂಟರ, ಕುರುಡರ, ಗತಿಯೇನು? ಅವರೇನು ತಪ್ಪು ಮಾಡಿದ್ದಾರೆ? ಆಗ ನಾವೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡಾಡಬೇಕಲ್ಲವೇ? ಮೂರ್ಖರಿಗೆ ಸಹಾನುಭೂತಿ ತೋರಿಸಬೇಕೆಂದು (ಜಗತ್ತಿನ ಮುಕ್ಕಾಲು ಭಾಗ ಮೂರ್ಖರಿಂದಲೇ ತುಂಬಿದೆ) ನಾವೂ ಮೂರ್ಖರಂತೆ ಬದುಕುವುದೇ? ಇದು ಖಂಡಿತ ಮನುಷ್ಯತ್ವವನ್ನು ತೋರಿಸುವ ರೀತಿಯಲ್ಲ. ಆದರೆ ಭಾರತದ ಬಡಜನ ಗಾಂಧಿಯಂಥವರನ್ನೇ ಪೂಜಿಸುತ್ತಾರೆ. ಈ ಬಡವರ ವೋಟನ್ನು ನಂಬಿರುವ ರಾಜಕಾರಿಣಿಗಳು ಗಾಂಧಿಗೆ ಜಯಕಾರ ಹಾಕಲೇ ಬೇಕಾಗಿದೆ. ಇದೇ ಇಲ್ಲಿನ ದುರಂತ. ನಾನು ಗಾಂಧಿಯನ್ನು ಹಂತ ಹಂತವಾಗಿ ಟೀಕಿಸಿದ್ದೇನೆ, ಒಂದೊಂದು ವಿಷಯದಲ್ಲೂ ಗಾಂಧಿಯನ್ನು ಪ್ರಶ್ನಿಸಿದ್ದೇನೆ ಆದರೆ ಈ ಇಪ್ಪತ್ತೈದು ವರ್ಷಗಳಲ್ಲಿ ಒಬ್ಬ ಗಾಂಧೀವಾದಿಯಿಂದಲೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ, ಒಂದು ಕಾಲದಲ್ಲಿ, ಗಾಂಧಿಯನ್ನು ವಿಮರ್ಶೆಗೆ ಒಳಪಡಿಸಲು ನಿರ್ಧರಿಸುವುದಕ್ಕೂ ಮುನ್ನ ನನ್ನ ಸುತ್ತ ಸದಾ ನೆರೆದಿರುತ್ತಿದ್ದ ಒಬ್ಬ ಗಾಂಧೀವಾದಿಯೂ ನನ್ನ ಟೀಕೆಗಳನ್ನು ಮರುವಿಮರ್ಶೆಗೆ ಒಳಪಡಿಸಿಲ್ಲ.೪೬

No comments:
Post a Comment